ಗುರುವಾರ, ಮೇ 7, 2015

ಇದು ಮಾಯೆಯೋ???

ಮುಸ್ಸಂಜೆಯ ಮಬ್ಬಿನಲೂ
ಸೂರ್ಯನಿಗೆ ಸುವರ್ಣದ ಹೊಳಪು ...
ದುಃಖಗಳ ಛಾಯೆಯೆಲ್ಲವೂ
ಮಂದವಾಗುತಿರುವ ಬೆಳಕಿನಲಿ
ಕರಗಿ ಹೋಗುತಿರುವಂತಿದೆ ...
ಪಾಪದ ಕೂಪಗಳೆಲ್ಲವೂ
ಇರುಳಿನ ಬೆಳಕಿನಲಿ
ಮರೆಯಾಗಿ ನಶಿಸುವಂತಿದೆ...
ಕೊರಗಿಸುವ ನೋವುಗಳೆಲ್ಲವೂ
ನಿಶೆಯ ತಂಪುಗಾಳಿಯಲಿ
ಬೆರೆತು ಸಾಂತ್ವನಿಸುವಂತಿದೆ...
ಬದುಕ ಕೆಟ್ಟ ಕ್ಷಣಗಳೆಲ್ಲವೂ
ಶಾಂತವಾಗಿ ನಿದ್ರೆಗೆ ಜಾರುತಲಿ
ಸುದಿನಗಳಾಗಿ ಪರಿವರ್ತಿಸುವಂತಿದೆ...
ಬದುಕಲಿ ಖುಷಿಯ ಕ್ಷಣಗಳು
ಸೂರ್ಯೋದಯದ ಸ್ವರ್ಣರಂಗಿನಂತೆ
ಹೊನ್ನ ಕಿರಣಗಳನ್ನು ಹರಡಿ
ಬದುಕ ಸಾರ್ಥಕಗೊಳಿಸುವಂತಿದೆ...

2 ಕಾಮೆಂಟ್‌ಗಳು:

  1. ನೀವೇ ಹೇಳುವಂತೆ ಬದುಕಿನಲಿ ಹಗಲು ಇರುಳಂತೆ ಒಮ್ಮೆ ನೋವು ಒಮ್ಮೆ ನಲಿವು ನಿರಂತರ. ಕೆಲವರಲ್ಲಿ ಅವರು ಬದುಕನ್ನು ನೋಡುವ ರೀತಿಗೋ ಏನೋ ಆ ಹಗಲು/ನಲಿವು ಇರುಳು/ನೋವು ಧೀರ್ಘದಂತೆ ಕಾಣುತ್ತದೆ, ಒಮ್ಮೊಮ್ಮೆ ಮುಗಿಯದಂತೆಯೂ. ಕೆಲವೊಮ್ಮೆ ಹಗಲಲ್ಲಿ ನೋವಿರುತ್ತದೆ ಇರುಳಲ್ಲಿ ಸುಖವೂ ಕಾಣಬಹುದು. ಮಾರ್ಮಿಕ ಮಾಯೆಯೇ ಹೌದಿದು.
    ಆದರೆ ಸೂರ್ಯನ ನವ ಬೆಳಕಿಗೆ ಹಳೆಯ ಅಂದಿನ ಕತ್ತಲು ಸಂಪೂರ್ಣ ಕರಗುವಂತೆ,ಮತ್ತೆ ದಿನಕಳೆದು ಹೊಸ ಕತ್ತಲು ಮೂಡುವಂತೆ ಇಲ್ಲಿಲ್ಲ. ಪಾಪಗಳು ಕರಗಿ ಹೋಗಲಾರವು. ನೆನ್ನೆಯ ಪಾಪವನ್ನು ಜೊತೆಯಲ್ಲಿ ಇಟ್ಟುಕೊಂಡೇ ಇಂದಿನದನ್ನೂ ಕೂಡಿಸುತ್ತಾ ಅಂಧಕಾರ ಗಾಢವಾಗುತ್ತದೆ.
    ಉತ್ತಮ ಕವಿತೆ ಕಟ್ಟಿದ್ದೀರಿ

    ಪ್ರತ್ಯುತ್ತರಅಳಿಸಿ