ನನ್ನ ಬಾಳ ಕತ್ತಲೆಗೆ
ಅರುಣನಾಗಿ ನೀ ಬಂದೆ
ಈ ಜೀವದ ನೋವಿಗೆ
ಬೆಳಕಾಗಿ ನೀ ಬಂದೆ.
ಬಯಸಲಾರೆ ನಾನೆಂದಿಗೂ
ವಿರಹವನು ನಿನ್ನಿಂದೆ
ಪ್ರಮಾಣಿಸುವೆ ಎಂದೆಂದಿಗೂ
ಪ್ರೀತಿಯೆರೆವೆ ನಿನಗೆಂದೇ.
ಬಾಳ ಸಕಲ ಹಾದಿಯಲೂ
ಕೈ ಹಿಡಿದು ಮುನ್ನಡೆಸು ನನ್ನ
ಜೀವನದ ಯಾವ ಬೇಗೆಯಲೂ
ಥಳಿಸಬೇಡ ಹಿಡಿದ ಕೈಯನ್ನ.
ನಮ್ಮ ಬಾಳ ದೋಣಿಯಿದು
ಮುಳುಗದಿರಲಿ ಯಾವತ್ತಿಗೂ
ನಮ್ಮ ಜಂಟಿ ದೀಪವಿದು
ನಂದಾದೀಪವಾಗಲಿ ಪ್ರತಿ ಹೊತ್ತಿಗೂ...
ಅರುಣನಾಗಿ ನೀ ಬಂದೆ
ಈ ಜೀವದ ನೋವಿಗೆ
ಬೆಳಕಾಗಿ ನೀ ಬಂದೆ.
ಬಯಸಲಾರೆ ನಾನೆಂದಿಗೂ
ವಿರಹವನು ನಿನ್ನಿಂದೆ
ಪ್ರಮಾಣಿಸುವೆ ಎಂದೆಂದಿಗೂ
ಪ್ರೀತಿಯೆರೆವೆ ನಿನಗೆಂದೇ.
ಬಾಳ ಸಕಲ ಹಾದಿಯಲೂ
ಕೈ ಹಿಡಿದು ಮುನ್ನಡೆಸು ನನ್ನ
ಜೀವನದ ಯಾವ ಬೇಗೆಯಲೂ
ಥಳಿಸಬೇಡ ಹಿಡಿದ ಕೈಯನ್ನ.
ನಮ್ಮ ಬಾಳ ದೋಣಿಯಿದು
ಮುಳುಗದಿರಲಿ ಯಾವತ್ತಿಗೂ
ನಮ್ಮ ಜಂಟಿ ದೀಪವಿದು
ನಂದಾದೀಪವಾಗಲಿ ಪ್ರತಿ ಹೊತ್ತಿಗೂ...
ಚಂದದ ಕವಿತೆ... ವಿರಹವನ್ನು ಸಹಿಸಲಾರೆ.. ನೀನು ಈ ವೇದನೆ ನೀಗಿಸದೆ ಸುಮ್ಮನಿರುವುದನ್ನು ಸಹಿಸಲಾರೆ,, ನನ್ನ ಪ್ರೀತಿ ಬೇರೆಯವರಿಗಾಗಿ ನೀಡಲು ಬಯಸಲಾರೆ ಎಂದು ಚಂದವಾಗಿ ಹೇಳಿದ್ದೀರಿ
ReplyDeleteಜಂಟಿ ದೀಪ ಉತ್ತಮ ಪ್ರಯೋಗ ಕಣ್ರೀ...
ReplyDelete