Wednesday, May 6, 2015

ವಿಪರ್ಯಾಸ

ಈ ದೀಪವ ನಿನಗೆಂದು ಉರಿಸಿದ್ದು
ಈಗ ಆರಿ ಹೋಗುವಂತಿದೆ...
ನನ್ನೀ ಮನವು ನಿನ್ನನೇ ವರಿಸಿದ್ದು
ಈಗ ಜಾರಿ ಬೀಳುವಂತಿದೆ...

ಯಾರ ಕೆಟ್ಟ ದೃಷ್ಟಿ ಬಿತ್ತೋ ನಾನರಿಯೆ
ಯಾರ ಕೃತ್ರಿಮದ ಫಲವೋ???
ಕಳಚುವಂತಿದೆ ನನ್ನೀ ಪ್ರೇಮದ ಆಸರೆಯೆ
ಯಾವ ಕುಕರ್ಮದ ಬಲವೋ???

ಆಹುತಿಯಾದೆ ನಾನಿಲ್ಲಿ ಸಮಾಜದ ಆಕ್ರಮಣಕೆ
ಎದುರಿಸಲು ಸಾಲದಾಯ್ತು ನಮ್ಮ ಪ್ರೇಮದ ಬಲ...
ವಿಷವಾಯ್ತು ನಮ್ಮಯ ಪ್ರೇಮದ ಅಂಕುರಕೆ
ಸಮಾಜದ ಕಟ್ಟುಪಾಡುಗಳೆಂಬ ಹಾಲಾಹಲ...

ನಿನಗಾಗಿಯೆ ಬೇಡಿಕೊಳ್ಳುತಿದೆ ನನ್ನ ಮನ
ಇಲ್ಲಿದೆ ಬರಿದು ನಿನ್ನಯ ಕ್ಷೇಮಚಿಂತನ...
ಪ್ರಾರ್ಥಿಸುವೆ ಭಗವಂತನಲಿ ನಾ ಅನುದಿನ
"ಸುರಕ್ಷಿತವಾಗಿಡು ಎಂದೆಂದಿಗೂ ನೀ ನನ್ನವನ"...

1 comment:

  1. ಅಷ್ಟೆಲ್ಲ ನೋವುಗಳ ನಡುವೆಯೂ ನಲ್ಲನ ಸೌಖ್ಯವನೇ ಬಯಸುವ ಹೆಣ್ಮನಕೊಂದು ಸಲಾಮು...

    ReplyDelete