ನನಗಸ್ಥಿತ್ವವೇ ಇಲ್ಲದಂತಾಗಿದೆ
ಯಾರಲ್ಲಿ ಹೇಳಿಕೊಳ್ಳಲಿ?
ನನ್ನವರೆಂದಾರೂ ಇಲ್ಲ ಇಲ್ಲಿ ...
ನನಗೆಂದು ಯಾರೂ ಇಲ್ಲ...
ನನ್ನ ಮನದ ಅಳಲನ್ನು ಅರಿವವರಾರೂ ಇಲ್ಲ...
ನಾ ಹೇಗೆ ಬಾಳುವೆನೋ?
ನಾನರಿಯದಂತಾಗಿದೆ...
ನನ್ನ ಬಾಳ ನೌಕೆಯು
ಅರ್ಧ ಮುಳುಗಿದಂತಿದೆ...
ಇನ್ನರ್ಧ ಎಂದು ಆಹುತಿಯಾಗುವುದೋ ನಾನರಿಯೆ...
ಕೊನೆಗೊಂಡಿತಿಂದು ನನ್ನ ಜೀವನಗಾಥೆ
ನಾನಂದುಕೊಂಡ ಬಾಳು ಇನ್ನಿಲ್ಲದಂತೆ ...
ವಿಲವಿಲನೆ ನರಳಿ ನಿರ್ಜೀವವಾದ ಜೀವಿಯಂತೆ...
ನಾ ರಚಿಸಿದ್ದ ಸ್ಥಾವರ ಚಿದ್ರ ಚಿದ್ರವಾದಂತೆ...
ಒಡೆದು ಚೂರಾಯ್ತು ನನ್ನ ಬಾಳ ಆಸೆ ಅಳಬೆ ಗಾಜಿನಂತೆ...
ಯಾರಲ್ಲಿ ಹೇಳಿಕೊಳ್ಳಲಿ?
ನನ್ನವರೆಂದಾರೂ ಇಲ್ಲ ಇಲ್ಲಿ ...
ನನಗೆಂದು ಯಾರೂ ಇಲ್ಲ...
ನನ್ನ ಮನದ ಅಳಲನ್ನು ಅರಿವವರಾರೂ ಇಲ್ಲ...
ನಾ ಹೇಗೆ ಬಾಳುವೆನೋ?
ನಾನರಿಯದಂತಾಗಿದೆ...
ನನ್ನ ಬಾಳ ನೌಕೆಯು
ಅರ್ಧ ಮುಳುಗಿದಂತಿದೆ...
ಇನ್ನರ್ಧ ಎಂದು ಆಹುತಿಯಾಗುವುದೋ ನಾನರಿಯೆ...
ಕೊನೆಗೊಂಡಿತಿಂದು ನನ್ನ ಜೀವನಗಾಥೆ
ನಾನಂದುಕೊಂಡ ಬಾಳು ಇನ್ನಿಲ್ಲದಂತೆ ...
ವಿಲವಿಲನೆ ನರಳಿ ನಿರ್ಜೀವವಾದ ಜೀವಿಯಂತೆ...
ನಾ ರಚಿಸಿದ್ದ ಸ್ಥಾವರ ಚಿದ್ರ ಚಿದ್ರವಾದಂತೆ...
ಒಡೆದು ಚೂರಾಯ್ತು ನನ್ನ ಬಾಳ ಆಸೆ ಅಳಬೆ ಗಾಜಿನಂತೆ...
ದುಖವೆಂಬುದು ಅಶಾಶ್ವತ ನೆಲೆ.
ReplyDeleteಸುಖದ ದಿಸೆಗದೇ ದಾರಿದೀಪ.