ಶನಿವಾರ, ಮೇ 16, 2015

ಸರಿ-ತಪ್ಪು

ಜೀವನದ ಪ್ರತಿ ಕ್ಷಣದ ಆಗುಹಕೂ
ಇರುವುದು ವಿಶ್ಲೇಷಣೆ ವಿಭಿನ್ನ
ಏಕ ಪಾರ್ಶ್ವದ ದೃಷ್ಟಿಕೋನದಿ
ಕೊಳ್ಳಬೇಡ ಯಾವುದೇ ತೀರ್ಮಾನ

ಒಂದು ನೋಟದಿ ಸರಿಯೆಂದಾದರೂ
ಮಹದಾದ ತಪ್ಪು ಅದಾಗಿರಬಹುದು
ಅನ್ಯಾಯದ ಪರಮಾವಧಿ ಎನಿಸಿದರೂ
ಲೋಕವೇ ಸರಿಯೆಂದೊಪ್ಪಬಹುದು

ಸರಿ- ತಪ್ಪುಗಳ ವೀಕ್ಷಣೆಯಲಿ
ವ್ಯತ್ಯಾಸಗಳನೇಕ ಈ ಜಗದಲಿ
ನಿನ್ನ ನಿರ್ಣಯದ ವಿಚಕ್ಷಣೆಯಲಿ
ಹೃದಯದ ಅನಿಸಿಕೆಯೇ  ಇರಲಿ

ಮಾಡು ನೀ ಹೃದಯ ಬಯಸಿದ್ದುದನು
ಚಿಂತಿಸು ಹೃತ್ಪೂರ್ವಕ ಮನದಲೇ 
ಸರಿ-ತಪ್ಪುಗಳ ಸರಿಯಾದ ತೀರ್ಪನು
ಪಡೆಯುವಿ ನೀ ನಿನ್ನ ಹೃದಯದಲೇ

3 ಕಾಮೆಂಟ್‌ಗಳು:

  1. ನಿಜ ಹೃದಯಕೆ ಗೊತ್ತು ಅಸಲಾದ ಸರಿ ಮತ್ತು ತಪ್ಪು.

    ಪ್ರತ್ಯುತ್ತರಅಳಿಸಿ
  2. ಸರಿ ತಪ್ಪುಗಳ ವಿಶ್ಲೇಷಣೆ ಬಹಳ ಕಷ್ಟ. ನಮ್ಮ ಮೂಗಿನ ನೇರಕ್ಕೆ ನಾವೇ ಸರಿ ಎನಿಸಿದರೂ ಕೆಲವೊಮ್ಮೆ ನಮ್ಮ ಬುದ್ದಿಗೆ ಸರಿಯೆನಿಸಿದ್ದು ನಮ್ಮ ಹೃದಯಕ್ಕೆ ತಪ್ಪೆನಿಸುತ್ತದೆ.

    ಪ್ರತ್ಯುತ್ತರಅಳಿಸಿ
  3. ಸರಿ ತಪ್ಪುಗಳ ವಿಶ್ಲೇಷಣೆ ಬಹಳ ಕಷ್ಟ. ನಮ್ಮ ಮೂಗಿನ ನೇರಕ್ಕೆ ನಾವೇ ಸರಿ ಎನಿಸಿದರೂ ಕೆಲವೊಮ್ಮೆ ನಮ್ಮ ಬುದ್ದಿಗೆ ಸರಿಯೆನಿಸಿದ್ದು ನಮ್ಮ ಹೃದಯಕ್ಕೆ ತಪ್ಪೆನಿಸುತ್ತದೆ.

    ಪ್ರತ್ಯುತ್ತರಅಳಿಸಿ