Sunday, February 14, 2010

ನನ್ನ ಮನದ ಅರಸ..

Everyone has feelings...everyone experiences some feelings which make them forget the world...which makes them forget everything and be in their own world...enjoying every moment...enjoying every minute...every second...every single activity..

Love...Love is the feeling of God...Many people do not understand the feeling of love which others have..but when they do experience it themselves they will understand it themselves...The below are the words which came out when I think about my Love...about my feelings...about the king of my heart...He is UNIQUE AND SPECIAL to me...

ನನ್ನ ಮನದ ಅರಸನಿಗಾಗಿ ಈ ಕೆಳಗಿನ ಸಾಲುಗಳು ಮೂಡಿ ಬಂದಾಗ...

ಹೃದಯದ ಮಿಡಿತ..

ಹೃದಯ ಮಿಡಿತದಿ ನೀನು..
ಹರಿವ ಪ್ರಾಣರಸದಿ ನೀನು..
ನನ್ನೊಡಲ ಭಾವದಿ ನೀನು..
ನನ್ನ ಸರ್ವಸ್ವದಿ ನೀನು..

ಸ್ಮಿತವಾಗಿ ಬಂದೆ ಈ ತುಟಿಯಲಿ..
ಹೊಳಪಾಗಿ ಬಂದೆ ಈ ಕಂಗಳಲಿ..
ಉಸಿರಾಗಿ ಬಂದೆ ನೀ ಗಾಳಿಯಲಿ..
ಬೆರೆತೆ ನನ್ನೀ ರೋಮ ರೋಮಗಳಲಿ..

ಒಲಿದ ಹೃದಯವೇ ನೀನು..
ತಾಳಲಾರೆ ಈ ದೂರವನು..
ಕಾದಿರುವೆ ನಿನ್ನ ಮೋಹವನು..
ಬಂದು ತೊಡೆ ಈ ವೇದನೆಯನು..

ಮೀರೋಣ ಜನತೆಯ ನಿಯಮಗಳ..
ಹೋರಾಡಿ ತಡೆಯೋಣ ಎಲ್ಲ ಕೋಲಾಹಲ..
ಸುಖಕರವಾಗಲಿ ಎಲ್ಲದರ ಫಲ..
ಮೂಡಲಿ ನಮ್ಮ ಸಂಬಂಧದಿ ಬಲ..

LUF ...

Saturday, January 30, 2010

ಸ್ನೇಹ- ನಿಜವಾದ ಗೆಳತಿ

ಸ್ನೇಹ ಎಂಬುದು ಎಲ್ಲರ ಬದುಕಿನಲ್ಲಿ "ಉಸಿರು" ಎಷ್ಟು ಮುಖ್ಯವೋ ಅಷ್ಟೇ ಮೌಲ್ಯವುಳ್ಳದ್ದು.. ಹಲವರ ಸ್ನೇಹ ಸಣ್ಣಪುಟ್ಟ ವಿಷಯಗಳಿಂದ ಬಿರುಕು ಮೂಡಿ ಮುರಿದು ಹೋಗುವುದು ಸಾಮಾನ್ಯ. ಆದರೆ ಅಂಥ ಬಿರುಕುಗಳನ್ನು ಸರಿಪಡಿಸಿ ಸ್ನೇಹವನ್ನು ಕಳೆದುಕೊಳ್ಳದೆ ಜೀವನ ಪರ್ಯಂತ ಮುಂದುವರೆಸಿಕೊಂಡು ಹೋಗುವುದೇ ನಿಜವಾದ ಪ್ರೀತಿ. ಅಂಥ ಒಂದು ನಿಜವಾದ ಗೆಳೆತನದ ಅನುಭವ ನನಗೆ ಸಿಕ್ಕಿದ್ದು ನನ್ನ ಪದವಿ ತರಗತಿಗಳಲ್ಲಿ ನನ್ನ ಜೊತೆಗಿದ್ದ ಒಬ್ಬ ಗೆಳತಿ.. ನಿಜವಾಗಿಯೂ ಜೀವನ ಪರ್ಯಂತ ಅವಳನ್ನು ನೆನೆಯುತ್ತಲೇ ಇರುವುದು ನನ್ನೀ ಮನ.. ಅವಳಿಗಾಗಿ ಈ ಕೆಳಗಿನ ಸಾಲುಗಳು...

ನಿಜವಾದ ಗೆಳತಿ

ಕದಡಿ ಹೋಗಿದ್ದ ಈ ನನ್ನ ಜೀವಕೆ
ಬೆಳಕಾದೆ ನೀ ನನ್ನ ಗೆಳತಿಯೇ..
ಸಂತಸ ನೀಡಿದೆ ನೀ ನನ್ನ ಮನಕೆ
ಓ ನನ್ನ ಪ್ರೀತಿಯ ಸಂಗಾತಿಯೇ.

ಬೇಸರವು ಕವಿದಿದ್ದ ಬಾಳ ಆಗಸದಿ
ತಂದೆ ನೀ ಉಲ್ಲಾಸದ ಭಾಸ್ಕರನ.
ನಿನಗೆಂದಿಗೂ ಚಿರಋಣಿ  ನಾ ಈ ಜೀವನದಿ
ಸೃಜಿಸಿದಕೆ ನನ್ನ ಸುತ್ತಲೂ ಸುಂದರವನ.

ಒಮ್ಮೆ ಹಾಸ್ಯದಿ, ಒಮ್ಮೆ ಮೌನದಿ
ಸುಖ ದುಃಖಗಳ ಹಂಚಿಕೊಳ್ಳುತ್ತ
ಸಂತುಷ್ಟರಾದೆವು ನಾವಿಬ್ಬರೂ..
ಒಬ್ಬರನೊಬ್ಬರು ಸರಿಯಾಗಿ ಅರ್ಥೈಸಿಕೊಳ್ಳುತ್ತ.

ನೀನೆ ನನ್ನ ನಲ್ಮೆಯ ಗೆಳತಿ
ನನ್ನ ಜೀವನದ ಕೊನೆವರೆಗೂ
ಶಾಶ್ವತವಾಗಿರುವ ಒಲ್ಮೆಯ ಗೆಳತಿ.

Sunday, January 17, 2010

ನನ್ನ ಆ ಒಂದು ಪುಟ್ಟ ಸ್ವಪ್ನ..

ಮನಸ್ಸು ಎಂಬುದೊಂದು ಇರುವ ಎಲ್ಲ ಜೀವಿಗಳೂ ಸ್ವಪ್ನ ಕಾಣುವುದು ಸಹಜ. ಹಾಗಿರುವಾಗ ನನ್ನ ಮನದಲ್ಲಿ ಮೂಡಿದ ಆ ಒಂದು ಸ್ವಪ್ನವು ಎಂಥ ಸ್ಥಿತಿಗಳನ್ನು ಕಾಣುತ್ತಿದೆ ಎನ್ನುವುದು ಈ ಕೆಳಗಿನ ಸಾಲುಗಳ ರೂಪ ತಳೆಯಿತು...


ಆ ಸ್ವಪ್ನ..

ಅವಿತಿದೆ ನನ್ನಲ್ಲೇ ಎಲ್ಲೋ..
ಭಾವನೆಗಳ ಗುಹೆಯೊಳಗೆ..
ಒಂದು ಸುಂದರವಾದ ಸ್ವಪ್ನ
ಸಾಕಾರವಾಗಲು ತಲ್ಲಣಿಸುತ.

ಆ ಸ್ವಪ್ನಕೆ ಸಾವಿರ ತಡೆಗಳು
ಹೊರಬರಲಾರದೆ ಚಡಪಡಿಸಿದೆ..
ಆ ಗುಹೆಯು ಬಲವಾಗುತಿರೆ,
ಸಾಕಾರಗೊಳಿಸುವ ಹಂಬಲ ಹೆಚ್ಚುತಿದೆ.

ಕಾಯುತಿದೆ ಮನವು "ಆ ದಿನವ"..
ಅಂದು ನನ್ನ ಸ್ವಪ್ನವು ನಿಜವಾಗಲಿದೆ.
ಜಗವ ಮೌನವಾಗಿಸಿ ಬರಲು
ನನ್ನ ಮನವು ಖುಷಿಯಾಗಲಿದೆ.

ಅವಿತಿರುವ ಸ್ವಪ್ನವು ಹೊರಬರಲು
ಮನದಾಸೆಯು ಪೂರ್ಣವಾಗಲು
ಜೀವನವು ಹೊಳೆಯುತಿರಲು
ಸೌಂದರ್ಯವು ಆವರಿಸುವುದು.

This is all about my Dream...I hope to see it come true in my lifetime..

Thursday, January 14, 2010

Old Age... ಮುದಿತನ

Old Age... Every Human's life passes through different stages - we name them as Infancy, Childhood, Adolescense, Adulthood, Middle Age and at the end- Old Age. The Old age is such a stage when a human loses all his strength, becomes weaker, loses all his enthusiasm in activities, loses his ability to take things lightly, becomes more like an unmatured kid. He/ She needs to be taken care of by someone like how a kid is taken care of. But many times we see that old people are not taken care of like how they should be.

It may be due to personal pressures or due to busy schedule of people they tend to forget the old people that they are old and needs to be taken care of. So they try and find outsourcing measure to take care of them, i.e. OLD AGE HOMES. Most of the well set up family leave their Old aged Family members in Old Age Homes to be taken care of. In my visit to such an Old Age Home when i spoke to different Old People, the same thoughts were flowing out of each and every Old person living there.. Those words took the form of the following lines in my hands..

ಮುದಿತನ...

ಜೀವನ ಕಾಲದಲ್ಲಿ ಬರುವ ಕೊನೆಯ ಅನುಭವಗಳೇ ಮುದಿತನ. ಮುದಿತನದಲ್ಲಿ ಇರುವಾಗ ಒಬ್ಬ ಮನುಷ್ಯನಿಗೆ ತನ್ನ ಜೀವಿತಾವಧಿಯಲ್ಲಿ ತಾನು ಮಾಡಿದ ಎಲ್ಲ ಕರ್ಮಗಳ ನೆನಪುಗಳು ಬಂದು ಎಂಥ ವೇದನೆಯಗುವುದೆಂದು ತಿಳಿಸಲು ಈ ಕೆಳಗಿನ ಸಾಲುಗಳು ಮುದಿತನಕ್ಕೆ ಕಾಲಿಟ್ಟ ಎಲ್ಲ ಹಿರಿಯ ತಳಿಗಳ ಭಾವನೆಗಳನ್ನು ತಿಳಿಸುತ್ತದೆ:

ಜೀವನ ದಟ್ಟ ಕಾನನ ಸೇರಿದೆ
ಹೊರಬರಲು ಅವಕಾಶವಿಲ್ಲ
ಹೊರಬರುವ ಸಮಯ ಬಂದಿಲ್ಲ..

ಸುತ್ತಿಕೊಂಡ ಈ ಮುಳ್ಳ ಬಳ್ಳಿಯ
ಬಂಧನದಿ ನರಳಾಡಿದೆ
ಬೀಸಿದ ಬಿರುಗಾಳಿಗೆ ಅದು
ಅಲುಗಾಡುತ ದಾರಿ ತಪ್ಪಿದೆ.

ಪ್ರಶಾಂತವಾಗಿದ್ದ ಕಡಲು ಇಂದು
ಭೋರ್ಗರೆಯುತ ಅಪ್ಪಳಿಸುತಿದೆ
ಶಾಂತಿಪ್ರಿಯ ಕಾನನದಿ ಇಂದು
ಅಗ್ನಿಜ್ವಾಲೆಯು ಹರಡುತಿದೆ.

ಸ್ವ-ಇಚ್ಚೆಯಿಂ ನಡೆದ ಈ ಬದುಕಲಿ
ಕರಾಳ ಛಾಯೆಯು ಮುಸುಕುತಿದೆ
ಮಮತೆಯಿಂ ಪೂರೆದಿದ್ದರು ಈ ದಿನದಲಿ
ಮಕ್ಕಳ ಪ್ರೇಮವು ಸವೆಯುತಿದೆ.

ಭಾಸ್ಕರನ ರಶ್ಮಿಗೆ ನಲಿದಿದ್ದರು
ಮುಸ್ಸಂಜೆಯ ನಿರಸವಿಂದು ಕಾಡುತಿದೆ
ಜೀವನ, ಸುಖದಿ ತೇಲಾಡಿದ್ದರು
ಈ ದಿನ ಅಶ್ರು ಸುರಿಸುತಿದೆ.

Sunday, January 10, 2010

My Grandma... ಅಜ್ಜಿ - ನಿನ್ನ ನೆನಪು ಸದಾ ನನ್ನಲಿ.....

Every Human being is born with bondages of different kind of relationships. Even if he wants to be out of all bondages he finds it difficult not to feel the feelings which he gets. Such a feeling increases the affection and makes the bondage stronger and unbreakable.

When we are kids, we make a lot of learnings from our Parents and most specially from our Grandparents. Grandparents are the best friends and the best teachers for every kid because they mingle with the kids becoming kids themselves. Thus, Grandparents are the most affectionate people with whom the bondage is very very strong for a kid. When such a Grandparent goes away forever... it affects the child's feelings upto the maximum.

Below are the lines which flew out of my thoughts when i lost my Grandmother dated 13th April, 2003...

ಚಿಕ್ಕವರಾಗಿದ್ದಾಗ ನಮಗೆಲ್ಲರಿಗೂ ಗೆಳತಿಯಂತೆ ವರವಾಗಿದ್ದು, ತನ್ನ ಖುಷಿಯನ್ನು ಮೊಮ್ಮಕ್ಕಳಾದ ನಮ್ಮಲ್ಲಿ ಕಂಡು, ಸರಿ ತಪ್ಪುಗಳು ಯಾವುದೆಂದು ಕಥಾರೂಪವಾಗಿ ಮನದಟ್ಟಾಗುವಂತೆ ಹೇಳಿ ರಂಜನೆಯೊಂದಿಗೆ ಬುದ್ಧಿಮಾತುಗಳನ್ನು ಹೇಳಿದ ಆ ಮಹಾತಾಯಿಗೆ ನನ್ನ ಹೃದಯಪೂರಿತವಾದ ನಮನಗಳು. ಆದರೆ, ಪ್ರಕೃತಿ ನಿಯಮವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಅಂತ ನನ್ನ ಅಜ್ಜಿಯನ್ನು ೧೩/೦೪/೨೦೦೩ಗೆ ಇಹಲೋಕದಿಂದ, ನಮ್ಮೆಲ್ಲರಿಂದ ದೂರ ಮಾಡಿದಾಗ ಮೂಡಿದ ಈ ಕೆಳಗಿನ ಸಾಲುಗಳು ಅವಳಿಗಾಗಿ, ಅವಳ ಮರಣಾನಂತರದ ಸಂತುಷ್ಟ ಜೀವನಕ್ಕಾಗಿ ಅರ್ಪಿತ....



ಅಜ್ಜಿ....


ನಿನ್ನೆ ರಾತ್ರಿಯವರೆಗೆ ಮಾತಾಡುತ್ತಲಿದ್ದೆ
ಬೆಳಕಾಗುತ್ತಲೇ ನೀ ಎಲ್ಲಿಗೆ ಹೋದೆ?
ಕರೆದಾಗಲೂ ನೀ "ಓ" ಎನ್ನದೆ
ನಿಶ್ಚಲವಾಗಿ, ನಿಶ್ಚಿಂತೆಯಿಂದ ಮಲಗಿದ್ದೆ..


ಮಾತು ಮಾತಿಗೂ ನಿನ್ನಲ್ಲಿದೆ ಗಾದೆ,
ಅದರಿಂದಾಗದು ಯಾರಿಗೂ ಭಾದೆ.
ನಿನ್ನಯ ಸವಿಮಾತುಗಳು ನೆನಪಾಗುತ್ತಲಿದೆ
ಸೋತೆ ನಾ ನಿನ್ನ ಮರೆಯಲಾಗದೆ..


ತಪ್ಪಾದಾಗ ನನ್ನ ತಿದ್ದುತ್ತಲಿದ್ದೆ
ಬುದ್ಧಿ ಮಾತನ್ನು ಹೇಳುತ್ತಲಿದ್ದೆ.
ಮಗುವಾಗಿದ್ದಾಗ ನನ್ನ ಸಾಕಿದ್ದೆ
ಇಂದಿಗೂ ನೀ ನನಗೆ ಬೇಕಿದ್ದೆ.


ಪ್ರಿಯ ಅಜ್ಜಿಯೇ, ನಿನ್ನಂಥವರಿಲ್ಲ ಬೇರೆ
ಬಿಡಿಸಿಕೊಂಡೆಯಾ ಈ ಜೀವನದ "ಸೆರೆ "
ನಿನ್ನಯ ನೆನಪೇ ಇಂದು ನಮಗಾಸರೆ
ಕಳುಹಿಸುವೆ ನಮ್ಮ ಅಶ್ರುಧಾರೆ.