ಪಿತಾ ಸ್ವರ್ಗಃ ಪಿತಾ ಧರ್ಮಃ ಪಿತಾ ಪರಮಕಂ ತಪಃ ।
ಪಿತರಿ ಪ್ರೀತಿಮಾಪನ್ನೇ ಸರ್ವಾಃ ಪ್ರೀಯಂತಿ ದೇವತಾಃ ।।
ನನ್ನ ಪ್ರೀತಿಯ ಅಪ್ಪ,
ಪುಟ್ಟ ಕಂದನಾಗಿ ನಿಮ್ಮ ಬಾಳಿಗೆ ಬಂದಾಗ ನಾನು, ಅತಿಯಾಗಿ ಆನಂದ ಪಟ್ಟವರೇ ನೀವು ಎಂದು ನಾನು ಬಲ್ಲೆ. ನಿಮ್ಮ ಮುದ್ದಿನಿಂದ ಬೆಳೆದ ನಾನು ಕಂಡ ಧೀರ ಮಹಾಪುರುಷ, ಇಂದಿಗೂ ನನಗೆ ಆಧಾರ ಸ್ಥಂಭದಂತೆ ನನ್ನ ಸಂರಕ್ಷಣೆಗೆ ನಿಲ್ಲುವ ಯೋಧ ನೀವೇ.
ನಿಮ್ಮೊಂದಿಗೆ ಕಳೆದ ಸುಕ್ಷಣಗಳು ನನಗೆ ಜೀವನದುದ್ದಕ್ಕೂ ಮಾದರಿಯಾಗಿ ನೆರವಾಗುವುದು ಖಂಡಿತವಾದ ವಿಚಾರ. ಚಿಕ್ಕವಳಾಗಿದ್ದಾಗ ನಿಮ್ಮ ಬೆಚ್ಚಗಿನ ಹೊದಿಕೆಯೊಳಗೆ ನುಸುಳುತ್ತಿದ್ದ ನನಗೆ ಸುರಕ್ಷಿತವಾಗಿರುವ ಭಾವನೆ. ದಾರಿಯುದ್ದಕ್ಕೂ ನಡೆಯುತ್ತಿರುವಾಗ ನಿಮ್ಮ ಗಟ್ಟಿಯಾದ ಕೈಹಿಡಿತ, ನಾನೇ ರಾಜಕುಮಾರಿ ಅನ್ನುವಂಥ ಭಾವನೆ. ನೀವು ಕಚೇರಿಯಿಂದ ಮರಳುವುದನ್ನೇ ಕಾಯುತ್ತಿದ್ದ ನಾನು, ಅಮ್ಮ ಕೊಡುತ್ತಿದ್ದ ಕೈ ತುತ್ತಿನ ಊಟ ಮುಗಿಸಿ ನಿಮ್ಮ ಕಾಲಿನ ಮೇಲೆ ಖುಷಿಯಾಗಿ ಸುಖವಾದ ನಿದ್ದೆಗೆ ಜಾರಿದಾಗ ಅದೃಷ್ಟವಂತೆ ಎನ್ನುವ ಭಾವನೆ.
ನನ್ನ ಜೊತೆ ನನ್ನ ವಯಸ್ಸಿನ ಅದೆಷ್ಟೋ ಮಕ್ಕಳಿಗೆ ಆಂಗ್ಲಮಾಧ್ಯಮ ಶಾಲೆ ಮಿಲಿಯಗಟ್ಟಲೆ ದೂರ ಎಂಬುದನ್ನು ತಿಳಿದು, ನೀವು ಹಲವಾರು ಮಹನೀಯರ ಜೊತೆ ಸೇರಿ ಆಂಗ್ಲಮಾಧ್ಯಮ ಶಾಲೆಯೊಂದನ್ನು ನಮ್ಮ ಊರಿನಲ್ಲೇ ಶುರು ಮಾಡಿದಾಗ, ಆ ಶಾಲೆ ನಡೆಸಲು ಜಾಗ ಸಿಗದಾಗ, ನಮ್ಮ ಮನೆಯ ಒಂದು ಭಾಗದಲ್ಲೇ ಶುರು ಮಾಡಿ, ಆಮೇಲೆ ಶಾಲೆಯ ಸ್ವಂತ ಕಟ್ಟಡ ಕಟ್ಟಿಸಲೆಂದು ನಿಮ್ಮ ಪಾಲಿನ ಜಾಗದ ಅಸ್ತಿಯನ್ನೇ ಶಾಲೆಗೆಂದು ದಾನ ಮಾಡಿದಾಗ, ಆ ಶಾಲೆಯಲ್ಲಿ ನಾನು ಕಲಿಯುತ್ತಿರುವಾಗ ನನಗಾಗುತ್ತಿದ್ದ ಹೆಮ್ಮೆ ವರ್ಣಿಸಲಸಾಧ್ಯ.
ನನಗೆ ನನ್ನ ಅಪ್ಪ ಖಂಡಿತವಾಗಿಯೂ ಮಹಾಪುರುಷನೇ.
ನಿಮ್ಮ ಪುಟ್ಟ ಕಂದ ಇಂತಿ
ಪಿತಾ ಸ್ವರ್ಗಃ ಪಿತಾ ಧರ್ಮಃ ಪಿತಾ ಪರಮಕಂ ತಪಃ ।
ಪಿತರಿ ಪ್ರೀತಿಮಾಪನ್ನೇ ಸರ್ವಾಃ ಪ್ರೀಯಂತಿ ದೇವತಾಃ ।।
ಪ್ರೀತಿಯ ಅಪ್ಪ,
ಪುಟ್ಟ ಕಂದನಾಗಿ ನಿಮ್ಮ ಬಾಳಿಗೆ ಬಂದಾಗ ನಾನು, ಅತಿಯಾಗಿ ಆನಂದ ಪಟ್ಟವರೇ ನೀವು ಎಂದು ನಾನು ಬಲ್ಲೆ. ನಿಮ್ಮ ಮುದ್ದಿನಿಂದ ಬೆಳೆದ ನಾನು ಕಂಡ ಧೀರ ಮಹಾಪುರುಷ, ಇಂದಿಗೂ ನನಗೆ ಆಧಾರಸ್ಥಂಭದಂತೆ ನನ್ನ ಸಂರಕ್ಷಣೆಗೆ ನಿಲ್ಲುವ ಯೋಧ ನೀವೇ.
ನಿಮ್ಮೊಂದಿಗೆ ಕಳೆದ ಸುಕ್ಷಣಗಳು ಜೀವನದುದ್ದಕ್ಕೂ ನನಗೆ ಮಾದರಿಯಾಗಿ ನೆರವಾಗುವುದು ಖಂಡಿತವಾದ ವಿಚಾರ. ಚಿಕ್ಕವಳಾಗಿದ್ದಾಗ ನಿಮ್ಮ ಬೆಚ್ಚಗಿನ ಹೊದಿಕೆಯೊಳಗೆ ನುಸುಳುತ್ತಿದ್ದ ನನಗೆ ಸುರಕ್ಷಿತವಾಗಿರುವ ಭಾವನೆ. ದಾರಿಯುದ್ದಕ್ಕೂ ನಡೆಯುತ್ತಿರುವಾಗ ನಿಮ್ಮ ಗಟ್ಟಿಯಾದ ಕೈಹಿಡಿತ, ನಾನೇ ರಾಜಕುಮಾರಿ ಅನ್ನುವಂಥ ಭಾವನೆ. ನೀವು ಕಚೇರಿಯಿಂದ ಮರಳುವುದನ್ನೇ ಕಾಯುತ್ತಿದ್ದ ನಾನು, ನಿಮ್ಮ ಕಾಲಿನ ಮೇಲೆ ಸುಖವಾದ ನಿದ್ದೆಗೆ ಜಾರಿದಾಗ ನಾನೇ ಅದೃಷ್ಟವಂತೆ ಎನ್ನುವ ಭಾವನೆ. ನೀವೇ ಭೂದಾನ ಮಾಡಿ ಶುರುಮಾಡಿದ ಶಾಲೆಯಲ್ಲಿ ಕಲಿಯುತ್ತಿರುವಾಗ ನನಗಾಗುತ್ತಿದ್ದ ಹೆಮ್ಮೆ ವರ್ಣಿಸಲಸಾಧ್ಯ.
ನನ್ನ ಅಪ್ಪ ಖಂಡಿತವಾಗಿಯೂ ಮಹಾಪುರುಷನೇ.
ಇಂತಿ ನಿಮ್ಮ ಪುಟ್ಟ ಕಂದ.