Wednesday, September 19, 2012

ಪ್ರೀತಿಯಾದೆ ನೀನು...

ಮನದಲಿ ನಿನ್ನ ಸನಿಹದಲಿ
ಬಾಳ ಪ್ರತಿಯೊಂದು ಹೆಜ್ಜೆಯಲಿ
ಸಿಲುಕಿ ನಾ ಪ್ರೀತಿ ಜಾಲದಲಿ
ಹುರಿದುಂಬಿದೆ  ಮನ ಸಂತೋಷದಲಿ.

ಪ್ರೀತಿಯ ಸಿಹಿ ರಕ್ತ ಕಣಕಣದಲಿ
ಮಧುರ ಸ್ವಪ್ನ ಪ್ರತಿಕ್ಷಣದಲಿ
ಸೌಂದರ್ಯದ ಅಲೆ ಈ ಕಂಗಳಲಿ
ನಿನ್ನ ಈ ಪ್ರೇಮದ ಮಾಧುರ್ಯದಲಿ.

ತುಂಬಿದೆ ಮನ ನಿನ್ನ ಸ್ನೇಹದಲಿ
ವಜ್ರದ ಹೊಳಪು ನಿನ್ನ ಪ್ರೇಮದಲಿ
ಸಂತೋಷದ ಮಿತಿ ನಿನ್ನ ನೆನಪಿನಲಿ
ನನಗಾಗಿಯೇ ನೀ ನನ್ನ ಬಾಳ ಹಾದಿಯಲಿ.

ನಿನ್ನ ಹೆಸರೇ ನನ್ನ ಪ್ರತಿ ಉಸಿರಿನಲಿ
ಬೆಳಕಾಗಿರುವೆ ನೀ ನನ್ನ ಬಾಳಿನಲಿ
ಬೆರೆತಿರುವೆ ನೀ ನನ್ನ ಈ ಹೃದಯದಲಿ
ಜೊತೆಯಾಗಿ ಬಾ ನೀ ನನ್ನ ಜೀವನದಲಿ. 

ಅಂತಹ ನೀನು...

ಸಪ್ತ ಜನ್ಮಗಳ ಸಂಬಂಧವೇನು?
ನನಗೆಂದೇ  ಬಂದಿಹೆ ನೀನು.
ನಿನ್ನ ಪ್ರೇಮಕೆ ಸೋತೆ ನಾನು
ನನ್ನಿಂದಲೇ ನನ್ನ ಅಪಹರಿಸಿದೆ ನೀನು.

ನನ್ನ ಬಾಳಿಗೆ ಬೆಳಕಾದೆ ನೀನು
ಸ್ವರ್ಗಸುಖದ ಕೊನೆಯ ಮೆಟ್ಟಿಲೇ ನೀನು
ನೀನೇ  ಆ ಸುಂದರ ಹೂವ ಕುಸುಮವೇನು?
ನಿನ್ನ ಇರುವಿಕೆಯೇ ನನಗೆ ಸವಿಜೇನು.

ಕೆಂಗುಲಾಬಿಯ ಮಾಧುರ್ಯವೇ ನೀನು
ಜೇನಹನಿಯ ರಸಸ್ವಾದವೇ ನೀನು
ಸಪ್ತಸ್ವರಗಳ ಇಂಪಾದ ಸಂಗೀತ ನೀನು
ಮೊದಲ ಮಳೆಹನಿಯ ತಂಪಿನ ಸ್ಪರ್ಶ ನೀನು.

ತಂಪು ಗಾಳಿಯ ರೋಮಾಂಚನ ನೀನು
ಮುಂಜಾವಿನ ಹಸಿರುಗರಿಕೆಯ ಸ್ಪರ್ಶ ನೀನು
ಸೂರ್ಯನ ಪ್ರಥಮ ಕಿರಣದ ಬೆಸುಗೆ ನೀನು
ನಿಶೆಯ ಕತ್ತಲಿಗೆ ಚಂದ್ರನ ಹೊಳಪು ನೀನು.

ನನ್ನ ಬಾಳಿನ ಸೌಂದರ್ಯದ ಮಿತಿ ನೀನು
ನನ್ನ ಹೃದಯದ ಪ್ರೀತಿಗೆ ಶಿಲ್ಪಿ ನೀನು.
ಸಪ್ತಜನ್ಮಗಳ ಸಂಬಂಧವೇ ಏನು ?
ನನ್ನ ಬಾಳ  ಬೆಳಕಾಗಿ ಬಂದೆ ನೀನು.

Sunday, September 16, 2012

ಶರಣಾದೆಯಾ ಮೃತ್ಯುವಿನ ಹೆಗಲಿಗೆ???

These words are depicting how a close friend of a person will feel when the said person ends his life without even sharing his difficulties or sadness with him....


"ಏನಿದೆ ಈ ನನ್ನ ಜೀವನದಿ?"
ಪ್ರಶ್ನೆಯಿದು ಮಿತ್ರನೊಬ್ಬನ ಮನದಿ.
ಏನೊಂದು ಸಾಧಿಸಬೇಕೆಂಬ ಛಲವಿಲ್ಲದೆ
ಮೌನಸಾಗರವನಿಂದು ಆ ಜೀವ ಅಪ್ಪಿದೆ.

ಮಿತ್ರಾ, ನೀನೇಕೆ ಹೀಗಾದೆ?
ಜೀವನದ ಬೆಲೆ ತಿಳಿಯದೇ?
ನಿನ್ನ ಸಂಕಟವ ತಿಳಿಯದೆ,
ಪ್ರಶ್ನೆಯನಂದು ನಾ ಕೇಳಿದೆ.

ನೀನಂದು ಹೋದೆ ಉತ್ತರಿಸದೇ
"ಬಾ, ಸಹಾಯ ಕೇಳು" ಎಂದರೂ ಕೇಳದೇ..
ಇಂದು ಸತ್ಯ ಬಂದಾಗ ಹೊರಗೆ,
ಕೈ  ನೀಡಲು ನೀನಿರದೇ ಹೋದೆ.

ತಪ್ಪ ಮಾಡಿದೆ ನೀ ಯೋಚಿಸದೆ
ಆಪ್ತನಾದ ನನ್ನಲ್ಲಿಯೂ ಹೇಳದೆ
ಪರಿತಪಿಸುತಿರುವೆ ನಾನಿಲ್ಲಿ ಇಂದು
ಸೋತೆ ನಿನ್ನನ್ನು ಉಳಿಸಿಕೊಳ್ಳಲಾರದೆ.

ಜೀವನವೆಂಬ ಮಹಾಸಾಗರದಲಿ
ನೀ ಅನುಭವಿಸಿದೆ 'ರಕ್ಕಸ ಅಲೆ'ಯ
ನನ್ನಲ್ಲಿಯೂ ಸಹಾಯಹಸ್ತ ಕೋರದೆ
ಶರಣಾದೆ ನೀನಿಂದು ಮೃತ್ಯುಸಾಗರಕೆ

ಮಿತ್ರಾ, ನೀನೇಕೆ ಹೀಗಾದೆ?
ಜೀವನದ ಬೆಲೆ ತಿಳಿಯದೇ?
ಕುರುಹನು ಬಿಟ್ಟು ನಮ್ಮ ಮನದಿ
ಎಲ್ಲಿಗೆ ನೀ ಹೊರಟು ಹೋದೆ???Saturday, September 15, 2012

ನೀನು.... ನಿನ್ನವಳು ನಾನು...

All about a Woman's feelings on her "The One and the Only"...


ಮನಸಲಿ ಏಳುತಿಹ ಆ ಅಲೆಗಳು
ನೆನಪುಗಳ ಛಾಯೆ ತಳಮಳಗಳು
ನಿನ್ನ ಹೆಸರನೇ ಹೇಳುತಿದೆ ಈ ನನ್ನ ಉಸಿರು...

ನಿನ್ನ ಕಡೆಗೇ ಸಾಗುತಿಹ ಈ ದಾರಿಗಳು
ನಿನ್ನನೇ ಅರಸುತ ಮುಂದೋಡುವ ಹೆಜ್ಜೆಗಳು
ನಿನಗಾಗಿಯೇ ನನ್ನ ಮನದಲಿ ಆಸೆಗಳ ಚಿಗುರು...

ನಿನ್ನನೇ ಬಯಸುವ ಆ ಸಾವಿರಾರು ಆಸೆಗಳು
ನಿನ್ನ ಸಂತೋಷವನೇ ಬಯಸುವ ಈ ಭಾವಗಳು
ಹೃದಯದಿ ಕೊರೆದಂತೆ ಶಾಶ್ವತ ಬರಿ ನಿನ್ನದೇ ಹೆಸರು.

ಎದೆಯಲೇ ಗೌಪ್ಯವಾಗಿದೆ ಸುಂದರ ಸ್ವಪ್ನಗಳು
ಹೇಳಲಾರದೆ ಬಂಧಿಯಾಗಿದೆ ನನ್ನೀ ಮಾತುಗಳು
ಆ ಎಲ್ಲಾ  ಕನಸುಗಳಲಿ ಸಾಗುತಿದೆ ನಮ್ಮಯ ಪ್ರೀತಿ ತೇರು...

ಶಾಶ್ವತ ಪ್ರೀತಿಯ ನಿನ್ನ  ಸುಂದರ ಕನಸುಗಳು
ಜೊತೆಯಾಗಿರುವ ಕನಸುಗಳ ಮೀರಲಾಗದ ಆಳಗಳು
ಬೀಳದಿರಲಿ ಎಂದಿಗೂ ಇದರಲಿ ನಮ್ಮಿಬ್ಬರ ಕಣ್ಣೀರು...

ಮನಸ್ಸು...

All about our Heart... Feelings... Life....

When life turns out to be an endless misery, a story like a black empty space...when there is no value given for love by people, the feelings of the lonely heart goes like this.....


ಮನಸ್ಸು...

ಬಂಧನದಲ್ಲಿರುವೆಯಾ? ಓ ಮನಸೇ ...
ನಿನ್ನ ಸುಖವನೆಲ್ಲಿ ನೀ ಅರಸುತಿಹೆ?
ನಿನ್ನ ಬೇರುಗಳಲ್ಲಿ ಮೂಡುತಿಹ ನೂರಾಸೆ...
ಅವುಗಳನ್ನೇಕೆ ತಡೆದು ಕೊಲ್ಲುತಿಹೆ???

ಸಿಹಿಯಾದ ನೀರಿರುವ ಆ ನದಿಯು,
ಉಪ್ಪು ಮಿಶ್ರಿತ ಜಲದ ಸಾಗರವ ಸೇರದೇ?
ಶುಭ್ರವಾದ ಆ ಮಳೆಯ ಹನಿಹನಿಯೂ
ಭೂಮಿ ಸೇರಿ ಹೊಸ ಜೀವ ಚಿಗುರೊಡೆಯದೇ?

ಪ್ರೀತಿಯೇ ನೀತಿಗೆ ಮೂಲ ಎಂದೆಂದೂ
ಪ್ರೀತಿಯ ಬಲಿಕೊಡುವುದು ನ್ಯಾಯವೇ?
ಮನಸಿಗೆ ಪ್ರೀತಿಯೇ ಬಲ ಎಂದೆಂದೂ
ಪ್ರೀತಿಯ ಬಿಟ್ಟಿರಲು ಮನಸಿಗೆ ಸಾಧ್ಯವೇ???

ಅನ್ಯಾಯ ದ್ವೇಷ ಭೇದ ಶತ್ರುತ್ವ
ಇವುಗಳೆಲ್ಲವ ತೊಡೆವುದು ಅಸಾಧ್ಯವೇ?
ಪ್ರೀತಿಯಿಂದ ಪ್ರೀತಿಯನೇ ಹಂಚುತ
ಜೀವಿಸುವುದೇ ಸರ್ವರಿಗೂ ಕ್ಷೇಮ ಅಲ್ಲವೇ???

Tuesday, September 11, 2012

ಚುಕ್ಕಿ - A Dot...


A small dot means so much...Though it means an END of something, it also acts like a ray of hope for a BEGINNING of something new and fresh...

When a dot is viewed in different angles of thought, it became a flow of the following words.....


ಚುಕ್ಕಿ...

ಆದಿಯೂ ನೀನು ಅಂತ್ಯವೂ ನೀನು
ಅತಿ ಚಿಕ್ಕದಾದರೂ ನಿನ್ನ ಮಹಿಮೆಯೇನು!!!
ನೀನಿದ್ದರೆ ತಾನೇ ಆಗುವುದು ಹೊಸದರಾರಂಭ
ನಿನಿದ್ದರೇನೇ ಕೊನೆ ಹಳೆಯದರ ಬಿಂಬ.

ನಿನ್ನಲ್ಲೇ ಅಡಗಿಹುದು ಭವಿಷ್ಯದಾಕಾಂಕ್ಷೆ
ನಿನ್ನಿಂದಲೇ ಸಿಗುವುದು ಭೂತದಿಂದ ರಕ್ಷೆ.
ನೀನೇ ಮೂಡಿಸುವೆ ಭಾವನೆಗಳ ಸಂದೇಹ
ನೀನೇ ತೊಡೆದು ಹಾಕುವೆ ಆಸೆಗಳ ದಾಹ.

ಪ್ರತಿಯೊಂದು ಮಾತಿಗೂ ನೀ ನೀಡುವೆ ಒಂದರ್ಥ
ಪ್ರತಿಯೊಂದು ಮೌನವೂ ನೀನಿರದೆ ಬರಿ ವ್ಯರ್ಥ.
ಕೋಪ ಸಂತಾಪಗಳಿಗೆ ನೀನೇ ನೀಡುವೆ ಅಂತ್ಯ
ನಿನ್ನಿಂದಲೇ ಹಸನಾಗುವುದು ಜೀವನವು ನಿತ್ಯ.

ನಿನ್ನಿಂದಲೇ ಆಗುವುದೆಲ್ಲವೂ ಸಂಪೂರ್ಣ
ನಿನ್ನಿಂದಲೇ ಈ ಜನ್ಮ ಪರಿಪೂರ್ಣ.
ನೀನೇ ಆಗುವೆ ನವನವೀನತೆಗೆ ಆದಿ...
ನಿನ್ನಿಂದ ಕೊನೆಯಾಗದು ಸಂತೋಷದ ಹಾದಿ...


A Ray of Hope for the Unseen Future's Happiness...