Thursday, May 7, 2015

ಏಕೆ ಹೀಗೆ???

ಮಾಗಿದ ಹಣ್ಣಿನ ಬೀಜದಿಂದ
ಹೊರಬರುವ ಮೊಳಕೆಯಂತೆ
ತವಕಿಸುತಿರುವೆನು ನಾನು
ಹೊಸ ಹುರುಪನ್ನು ಬೇಡುವಂತೆ...

ಮುದಿದ ಈ ನನ್ನ ಮನವು
ಸಿಡಿಸುವುದು ರೋಷದ ಮಾತನು
ಮನದೊಳಗಣ ಈ ದುಃಖವನು
ಯಾವೊಬ್ಬನೂ ಅರಿಯಲಾರನು...

ಒಂಟಿತನವೇ ಸಾಕೆಂದು ನಾ
ಬೇಡಿಕಾಡಿದರೂ ತಿಳಿಯಲಾರರು...
ಸಮಯವನೇ  ನೀಡದಿರುವ
ಶಿಕ್ಷೆಯ ಅನುಭವಿಸಬೇಕೆನ್ನುವರು...

ಮನಕೆ ಶಾಂತಿಯ ನೀಡಲು
ಸಮಯ ಯಾರಿಗೂ ಇಲ್ಲವೇ ???
ಸ್ವಾರ್ಥವೇ ಮನೆಮಾಡಿರುವಂತೆ
ಮಾನವೀಯತೆಯ ಅರಿವೂ ಇಲ್ಲವೇ???
ನಾನಿಂದು ಬಲಿಯಾಗಿರುವೆ....

1 comment:

  1. ಜಗವದೇಕೋ ತನ್ನೊಳಗೇ ರಿಂಗಣಿಸು ಸ್ವಾರ್ಥದ ಉರುಳಾಗಿದೆ!

    ReplyDelete