ಹರಡಿರುವ ಕಾರ್ಮೋಡದ ಛಾಯೆಯಲೂ
ಕಾಣುತಿದೆ ಹೊಸದೊಂದು ಹುರುಪು
ಮುಸುಕಿರುವ ಪ್ರೇಮದ ಮಾಯೆಯಲೂ
ಬೆಳಗುವುದೆಂತು ವಿಜಯದ ಹೊಳಪು?
ಭಯವೆಂಬ ಕಟೋರ ಬೇಲಿಯೊಳಗೂ
ಬೆಳಗುತ್ತಿದೆ ಆಶಯದ ದೀವಿಗೆ
ಪ್ರೀತಿಯ ಅಧ್ಬುತವಾದ ಕೀಲಿಯೊಳಗೂ
ತುಳುಕುತಿದೆ ಭಾವನೆಗಳ ತಂಬಿಗೆ'
ಕೊನೆಯಾಗದ ಆಸೆಗಳ ರಾಶಿಯಲೂ
ತಾರಕಕ್ಕೇರಿಹುದು ಮೋಹದ ದನಿ
ಸ್ವಾರ್ಥಿಗಳ ಅಟ್ಟಹಾಸದ ಮಾರುತದಲಿ
ಹರಿಯದಿರಲಿ ಎಂದಿಗೂ ನೋವ ಕಂಬನಿ ...
ವಾಹ್ ವಾ...!! ಚೈತ್ರದ ಚಿಗುರಿನಂತೆ, ಪಲ್ಲವಿಸುವ ಪ್ರತಿ ಕನಸುಗಳು... ನನಸಾಗಲಿ; ಧನಾತ್ಮಕವಾಗಿ ಯೋಚಿಸುವ ಚಿಂತನೆಗಳು ಯಾವಾಗಲೂ ಜಯದ ಸಂಕೇತ.
ReplyDelete