Tuesday, September 11, 2012

ಚುಕ್ಕಿ - A Dot...


A small dot means so much...Though it means an END of something, it also acts like a ray of hope for a BEGINNING of something new and fresh...

When a dot is viewed in different angles of thought, it became a flow of the following words.....


ಚುಕ್ಕಿ...

ಆದಿಯೂ ನೀನು ಅಂತ್ಯವೂ ನೀನು
ಅತಿ ಚಿಕ್ಕದಾದರೂ ನಿನ್ನ ಮಹಿಮೆಯೇನು!!!
ನೀನಿದ್ದರೆ ತಾನೇ ಆಗುವುದು ಹೊಸದರಾರಂಭ
ನಿನಿದ್ದರೇನೇ ಕೊನೆ ಹಳೆಯದರ ಬಿಂಬ.

ನಿನ್ನಲ್ಲೇ ಅಡಗಿಹುದು ಭವಿಷ್ಯದಾಕಾಂಕ್ಷೆ
ನಿನ್ನಿಂದಲೇ ಸಿಗುವುದು ಭೂತದಿಂದ ರಕ್ಷೆ.
ನೀನೇ ಮೂಡಿಸುವೆ ಭಾವನೆಗಳ ಸಂದೇಹ
ನೀನೇ ತೊಡೆದು ಹಾಕುವೆ ಆಸೆಗಳ ದಾಹ.

ಪ್ರತಿಯೊಂದು ಮಾತಿಗೂ ನೀ ನೀಡುವೆ ಒಂದರ್ಥ
ಪ್ರತಿಯೊಂದು ಮೌನವೂ ನೀನಿರದೆ ಬರಿ ವ್ಯರ್ಥ.
ಕೋಪ ಸಂತಾಪಗಳಿಗೆ ನೀನೇ ನೀಡುವೆ ಅಂತ್ಯ
ನಿನ್ನಿಂದಲೇ ಹಸನಾಗುವುದು ಜೀವನವು ನಿತ್ಯ.

ನಿನ್ನಿಂದಲೇ ಆಗುವುದೆಲ್ಲವೂ ಸಂಪೂರ್ಣ
ನಿನ್ನಿಂದಲೇ ಈ ಜನ್ಮ ಪರಿಪೂರ್ಣ.
ನೀನೇ ಆಗುವೆ ನವನವೀನತೆಗೆ ಆದಿ...
ನಿನ್ನಿಂದ ಕೊನೆಯಾಗದು ಸಂತೋಷದ ಹಾದಿ...


A Ray of Hope for the Unseen Future's Happiness...

No comments:

Post a Comment