Sunday, September 16, 2012

ಶರಣಾದೆಯಾ ಮೃತ್ಯುವಿನ ಹೆಗಲಿಗೆ???

These words are depicting how a close friend of a person will feel when the said person ends his life without even sharing his difficulties or sadness with him....


"ಏನಿದೆ ಈ ನನ್ನ ಜೀವನದಿ?"
ಪ್ರಶ್ನೆಯಿದು ಮಿತ್ರನೊಬ್ಬನ ಮನದಿ.
ಏನೊಂದು ಸಾಧಿಸಬೇಕೆಂಬ ಛಲವಿಲ್ಲದೆ
ಮೌನಸಾಗರವನಿಂದು ಆ ಜೀವ ಅಪ್ಪಿದೆ.

ಮಿತ್ರಾ, ನೀನೇಕೆ ಹೀಗಾದೆ?
ಜೀವನದ ಬೆಲೆ ತಿಳಿಯದೇ?
ನಿನ್ನ ಸಂಕಟವ ತಿಳಿಯದೆ,
ಪ್ರಶ್ನೆಯನಂದು ನಾ ಕೇಳಿದೆ.

ನೀನಂದು ಹೋದೆ ಉತ್ತರಿಸದೇ
"ಬಾ, ಸಹಾಯ ಕೇಳು" ಎಂದರೂ ಕೇಳದೇ..
ಇಂದು ಸತ್ಯ ಬಂದಾಗ ಹೊರಗೆ,
ಕೈ  ನೀಡಲು ನೀನಿರದೇ ಹೋದೆ.

ತಪ್ಪ ಮಾಡಿದೆ ನೀ ಯೋಚಿಸದೆ
ಆಪ್ತನಾದ ನನ್ನಲ್ಲಿಯೂ ಹೇಳದೆ
ಪರಿತಪಿಸುತಿರುವೆ ನಾನಿಲ್ಲಿ ಇಂದು
ಸೋತೆ ನಿನ್ನನ್ನು ಉಳಿಸಿಕೊಳ್ಳಲಾರದೆ.

ಜೀವನವೆಂಬ ಮಹಾಸಾಗರದಲಿ
ನೀ ಅನುಭವಿಸಿದೆ 'ರಕ್ಕಸ ಅಲೆ'ಯ
ನನ್ನಲ್ಲಿಯೂ ಸಹಾಯಹಸ್ತ ಕೋರದೆ
ಶರಣಾದೆ ನೀನಿಂದು ಮೃತ್ಯುಸಾಗರಕೆ

ಮಿತ್ರಾ, ನೀನೇಕೆ ಹೀಗಾದೆ?
ಜೀವನದ ಬೆಲೆ ತಿಳಿಯದೇ?
ಕುರುಹನು ಬಿಟ್ಟು ನಮ್ಮ ಮನದಿ
ಎಲ್ಲಿಗೆ ನೀ ಹೊರಟು ಹೋದೆ???



No comments:

Post a Comment