All about a Woman's feelings on her "The One and the Only"...
ಮನಸಲಿ ಏಳುತಿಹ ಆ ಅಲೆಗಳು
ನೆನಪುಗಳ ಛಾಯೆ ತಳಮಳಗಳು
ನಿನ್ನ ಹೆಸರನೇ ಹೇಳುತಿದೆ ಈ ನನ್ನ ಉಸಿರು...
ನಿನ್ನ ಕಡೆಗೇ ಸಾಗುತಿಹ ಈ ದಾರಿಗಳು
ನಿನ್ನನೇ ಅರಸುತ ಮುಂದೋಡುವ ಹೆಜ್ಜೆಗಳು
ನಿನಗಾಗಿಯೇ ನನ್ನ ಮನದಲಿ ಆಸೆಗಳ ಚಿಗುರು...
ನಿನ್ನನೇ ಬಯಸುವ ಆ ಸಾವಿರಾರು ಆಸೆಗಳು
ನಿನ್ನ ಸಂತೋಷವನೇ ಬಯಸುವ ಈ ಭಾವಗಳು
ಹೃದಯದಿ ಕೊರೆದಂತೆ ಶಾಶ್ವತ ಬರಿ ನಿನ್ನದೇ ಹೆಸರು.
ಎದೆಯಲೇ ಗೌಪ್ಯವಾಗಿದೆ ಸುಂದರ ಸ್ವಪ್ನಗಳು
ಹೇಳಲಾರದೆ ಬಂಧಿಯಾಗಿದೆ ನನ್ನೀ ಮಾತುಗಳು
ಆ ಎಲ್ಲಾ ಕನಸುಗಳಲಿ ಸಾಗುತಿದೆ ನಮ್ಮಯ ಪ್ರೀತಿ ತೇರು...
ಶಾಶ್ವತ ಪ್ರೀತಿಯ ನಿನ್ನ ಸುಂದರ ಕನಸುಗಳು
ಜೊತೆಯಾಗಿರುವ ಕನಸುಗಳ ಮೀರಲಾಗದ ಆಳಗಳು
ಬೀಳದಿರಲಿ ಎಂದಿಗೂ ಇದರಲಿ ನಮ್ಮಿಬ್ಬರ ಕಣ್ಣೀರು...
ಮನಸಲಿ ಏಳುತಿಹ ಆ ಅಲೆಗಳು
ನೆನಪುಗಳ ಛಾಯೆ ತಳಮಳಗಳು
ನಿನ್ನ ಹೆಸರನೇ ಹೇಳುತಿದೆ ಈ ನನ್ನ ಉಸಿರು...
ನಿನ್ನ ಕಡೆಗೇ ಸಾಗುತಿಹ ಈ ದಾರಿಗಳು
ನಿನ್ನನೇ ಅರಸುತ ಮುಂದೋಡುವ ಹೆಜ್ಜೆಗಳು
ನಿನಗಾಗಿಯೇ ನನ್ನ ಮನದಲಿ ಆಸೆಗಳ ಚಿಗುರು...
ನಿನ್ನನೇ ಬಯಸುವ ಆ ಸಾವಿರಾರು ಆಸೆಗಳು
ನಿನ್ನ ಸಂತೋಷವನೇ ಬಯಸುವ ಈ ಭಾವಗಳು
ಹೃದಯದಿ ಕೊರೆದಂತೆ ಶಾಶ್ವತ ಬರಿ ನಿನ್ನದೇ ಹೆಸರು.
ಎದೆಯಲೇ ಗೌಪ್ಯವಾಗಿದೆ ಸುಂದರ ಸ್ವಪ್ನಗಳು
ಹೇಳಲಾರದೆ ಬಂಧಿಯಾಗಿದೆ ನನ್ನೀ ಮಾತುಗಳು
ಆ ಎಲ್ಲಾ ಕನಸುಗಳಲಿ ಸಾಗುತಿದೆ ನಮ್ಮಯ ಪ್ರೀತಿ ತೇರು...
ಶಾಶ್ವತ ಪ್ರೀತಿಯ ನಿನ್ನ ಸುಂದರ ಕನಸುಗಳು
ಜೊತೆಯಾಗಿರುವ ಕನಸುಗಳ ಮೀರಲಾಗದ ಆಳಗಳು
ಬೀಳದಿರಲಿ ಎಂದಿಗೂ ಇದರಲಿ ನಮ್ಮಿಬ್ಬರ ಕಣ್ಣೀರು...
No comments:
Post a Comment