ಮುಂದೋಡುತಿದೆ ಈ ಸಮಯ
ಕಾಣಲಾರೆನು ಎಲ್ಲಿಯೂ ವಿಸ್ಮಯ
ಅಂತರಾಳದ ಭಾವನೆಗೆಲ್ಲಿದೆ ಆಶ್ರಯ?
ಜೀವನದಿ ಸಂತೋಷವಿದೆಯೇ? ಎಂಬುದು ಕೇವಲ ಸಂಶಯ...
ಬೇಕೆನಿಸಿದ್ದು ಸಿಗುವುದೇ ಸಂಶಯ
ಮನದಾಸೆ ಪೂರೈಸಲಿ ಎನ್ನುವುದೇ ಆಶಯ
ಯಾರು ನೀಡುವರು ನನಗಿಂದು ಅಭಯ?
ಪ್ರೀತಿಗೆ ಬಲ ಹಾರೈಸಿ ಬರಲಿ ಎಂಬುದು ಮನದಾಶಯ...
ನನ್ನಾಗಮನಕೆ ಕಾಯದಲ್ಲವೇ ಈ ಪ್ರಾಯ
ಯಾರು ಹೇಳಬಲ್ಲಿರಿ ಸಂತೋಷಕೊಂದುಪಾಯ?
ಯಾವುದನ್ಯಾಯ ಯಾವುದು ನ್ಯಾಯ?
ಎಂಬುದ ತಿಳಿಯದ ಯುಕ್ತಿಗೊಂದು ತಳಪಾಯ...
ಆಗುವುದೆಂದು ನನ್ನ ದುಃಖಗಳು ಮಾಯ
ಕಾಯುತಿಹೆ ನಾ ಸಂತಸ ಸುರಿಮಳೆ ಹಾದಿಯ
ಕೊನೆಗೊಳ್ಳುವುದೆಂದು ಈ ಕಾರ್ಮೋಡದ ಛಾಯ?
ಕಳವಳ ಮನಕೆ ಸಿಗಲಿ ಸಮಾಧಾನದ ಜಯ...
No comments:
Post a Comment