Saturday, July 23, 2022

ತುಳಸೀ ಗಿಡ ಒಣಗುವುದಕ್ಕೆ ಮುಖ್ಯ ಕಾರಣಗಳು‌...

ತುಳಸೀ ಗಿಡ ಒಣಗುವುದಕ್ಕೆ ಮುಖ್ಯ ಕಾರಣಗಳು‌...

🙏೧. ಕುಂಡದಲ್ಲಿ ಹಾಕಿದರೆ ಅಷ್ಟು ಬೆಳವಣಿಗೆ ಆಗುವುದಿಲ್ಲ, ಬೇರು ಬಿಡುವುದಕ್ಕೆ ಸ್ಥಳಾವಕಾಶ ಕಮ್ಮಿ ಇರುತ್ತೆ..
🙏೨. ತುಳಸೀ ಗಿಡವನ್ನು ಸ್ನಾನ ಮಾಡದೇ ಮುಟ್ಟಿದರೆ, ಮೈಲಿಗೆ ಇರುವಾಗ ಬಿಡಿಸಿದರೆ, ಮೈಲಿಗೆ ಇರುವವರು ಮುಟ್ಟಿದರೆ, ಬೇಗ ಒಣಗುವುದು..
🙏೩. ತುಳಸಿಯನ್ನು ಉಗುರಿನಿಂದ ಕಿತ್ತರೆ, ಊಟದ ನಂತರ ಪೂಜಿಸುವ ಗಿಡದಿಂದ ತುಳಸಿ ಕಿತ್ತರೆ ಬೇಗ ಒಣಗುತ್ತದೆ..
🙏೪. ಅಶುಚಿಯಾದ ನೀರನ್ನು, ಮಡಿಯಿಲ್ಲದ ನೀರನ್ನು ಹಾಕಿದರೂ ತುಳಸೀಗಿಡ ಒಣಗುವುದು..
🙏೫. ತುಳಸೀ ಗಿಡಕ್ಕೆ ಗಿಡ ಬೆಳೆದ ಹಾಗೇ ಬೇರೆ ಮಣ್ಣನ್ನು ಹಾಕುತ್ತಿರಬೇಕು, ಇಲ್ಲದಿದ್ದರೆ ಫಲವತ್ತತೆ ಇಲ್ಲದೇ ಬೇಗ ಒಣಗುವುದು..
🙏೬. ತುಂಬಾ ತುಳಸೀ ಗಿಡ ಒಣಗುತ್ತಿದ್ದರೆ ಮೃತ್ತಿಕೆಯನ್ನು ತಂದು ತುಳಸೀ ಗಿಡದಲ್ಲಿ ಹಾಕಿ , ಚೆನ್ನಾಗಿ ಬೆಳೆಯುವುದು..
🙏೭. ಮನೆಯ ಮೇಲೆ ದುಷ್ಟಗ್ರಹ ಪ್ರಭಾವ ಬಿದ್ದಾಗ, ಮಾಟ ಮಂತ್ರ ದೋಷವಾದಾಗ , ಅದನ್ನು ತುಳಸೀ ತಡೆಯುವುದು..ಕೆಲವೊಂದು ಅಹಿತಕರ ಸನ್ನಿವೇಶದಿಂದ ನಿಮ್ಮನ್ನು ರಕ್ಷಿಸುವ ಸಮಯದಲ್ಲಿ ತುಳಸೀ ಒಣಗುವುದು ಉಂಟು..ಇದು ಎಚ್ಚರಿಕೆಯ ಸಂದೇಷವೂ ಕೂಡ..
🙏೮. ಪ್ರತಿದಿನ ತುಳಸೀ ನೀರನ್ನು ಕುಡಿಯುವುದರಿಂದ ಮಾಟ ಮಂತ್ರ ತಟ್ಟುವುದಿಲ್ಲ..
🙏೯. ತುಳಸೀಗಿಡದ ಮುಂದೆ ಪ್ರತಿದಿನ ದೀಪ ಹಚ್ಚುವುದರಿಂದ ದುಷ್ಟಶಕ್ತಿಗಳು ಮನೆಯನ್ನು ಪ್ರವೇಶ ಮಾಡುವುದಿಲ್ಲ, ನೆಲ್ಲಿಕಾಯಿ ದೀಪ ಹಚ್ಚುವುದರಿಂದ ಲಕ್ಷ್ಮೀಕಟಾಕ್ಷವಾಗುವುದು..
🙏೧೦. ತುಳಸೀ ಪೂಜೆಯನ್ನು ಪೂರ್ವ ಅಥವಾ ಉತ್ತರಾಭಿಮುಖವಾಗಿ ಮಾಡುವುದು ಶುಭ, ಉತ್ತರ ಅಥವಾ ಈಶಾನ್ಯ ಅಭಿಮುಖವಾಗಿ ಮಾಡುವುದು ಅತ್ಯಂತ ಶುಭ..
🙏೧೧. ತುಳಸೀ ಬಿಡಿಸುವಾಗ ವಿಷ್ಣುಪರಮಾತ್ಮರ ಕ್ಷಮೆ ಕೋರಿ, ಗಿಡವನ್ನು ಅಲ್ಲಾಡಿಸಿ, ಒಣಗಿದ ಎಲೆಯಲ್ಲಾ ಉದುರಿದ ನಂತರ ತುಳಸಿಯನ್ನು ಬಿಡಿಸಿ..
ನೀವು ತುಳಸೀ ಬಿಡಿಸುವಾಗ ತುಳಸಿ ನೆಲಕ್ಕೆ ಬಿದ್ದರೆ "ಬ್ರಹ್ಮಹತ್ಯಾ" ದೋಷ ಬರುವುದು..
ನೆಲಕ್ಕೆ ಬಿದ್ದ ತುಳಸೀ ಪೂಜಿಸಬಾರದು.

(ಸಂಗ್ರಹ)

Saturday, July 9, 2022

ನಾಮ ರಾಮಾಯಣ

ರಾಮಾಯಣವು  ಮಹರ್ಷಿ ವಾಲ್ಮೀಕಿ ಬರೆದ ಮಹಾ ಗ್ರಂಥ. ಈ ರಾಮಾಯಣ ೨೪೦೦೦ ಶ್ಲೋಕಗಳನ್ನೊಳಗೊಂಡು, ೭ ಪುಸ್ತಕಗಳಾಗಿ ವಿಭಜನೆ ಮಾಡಲಾಗಿದೆ. ಈ ರಾಮಾಯಣವನ್ನು ಒಂದೇ ಸಲಕ್ಕೆ ಓದಿ ಮುಗಿಸಲು ಅಸಾಧ್ಯವಾದ ಮಾತು. ಹೀಗಾಗಿ, ರಾಮಾಯಣದ ಶ್ಲೋಕವನ್ನು ಚಿಕ್ಕದಾಗಿ ಮಹರ್ಷಿ ವಾಲ್ಮೀಕಿ ಅವರು ೧೦೮ ಶ್ಲೋಕಗಳ ನಾಮ ರಾಮಾಯಣ ಎಂಬುದಾಗಿ ರಚಿಸಿದ್ದಾರೆ. ಇದು ಸಂಪೂರ್ಣ ರಾಮಾಯಣದ ಹಾಗೆಯೇ ಶ್ರೀ ರಾಮ ದೇವರ  ಎಲ್ಲ ಕಥೆಗಳನ್ನು ೧೦೮ ನಾಮದಲ್ಲಿ ವರ್ಣಿಸಿ ರಚಿಸಲಾಗಿದೆ. ಇದನ್ನು ಏಕಶ್ಲೋಕೀ ರಾಮಾಯಣ ಎಂದೂ ಕರೆಯುತ್ತಾರೆ. ಈ ಶ್ಲೋಕವನ್ನು ೭ ಭಾಗಗಳಾಗಿ ವಿಂಗಡಿಸಲಾಗಿದೆ - ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾಕಾಂಡ, ಸುಂದರಕಾಂಡ, ಯುದ್ಧ ಕಾಂಡ, ಉತ್ತರಕಾಂಡ. 


 ॥ ನಾಮರಾಮಾಯಣ ॥
॥ ಬಾಲಕಾಂಡಃ ॥


ಶುದ್ಧಬ್ರಹ್ಮಪರಾತ್ಪರ ರಾಮ ।
ಕಾಲಾತ್ಮಕಪರಮೇಶ್ವರ ರಾಮ ।
ಶೇಷತಲ್ಪಸುಖನಿದ್ರಿತ ರಾಮ ।
ಬ್ರಹ್ಮಾದ್ಯಮರಪ್ರಾರ್ಥಿತ ರಾಮ ।

ಚಂಡಕಿರಣಕುಲಮಂಡನ ರಾಮ ।
ಶ್ರೀಮದ್ದಶರಥನನ್ದನ ರಾಮ ।
ಕೌಸಲ್ಯಾಸುಖವರ್ಧನ ರಾಮ ।
ವಿಶ್ವಾಮಿತ್ರಪ್ರಿಯಧನ ರಾಮ ।

ಘೋರತಾಟಕಾಘಾತಕ ರಾಮ ।
ಮಾರೀಚಾದಿನಿಪಾತಕ ರಾಮ ।
ಕೌಶಿಕಮಖಸಂರಕ್ಷಕ ರಾಮ ।
ಶ್ರೀಮದಹಲ್ಯೋದ್ಧಾರಕ ರಾಮ ।

ಗೌತಮಮುನಿಸಮ್ಪೂಜಿತ ರಾಮ ।
ಸುರಮುನಿವರಗಣಸಂಸ್ತುತ ರಾಮ ।
ನಾವಿಕಧಾವಿಕಮೃದುಪದ ರಾಮ ।
ಮಿಥಿಲಾಪುರಜನಮೋಹಕ ರಾಮ ।

ವಿದೇಹಮಾನಸರಂಜಕ ರಾಮ ।
ತ್ರ್ಯಂಬಕಕಾರ್ಮುಖಭಂಜಕ ರಾಮ ।
ಸೀತಾರ್ಪಿತವರಮಾಲಿಕ ರಾಮ ।
ಕೃತವೈವಾಹಿಕಕೌತುಕ ರಾಮ ।

ಭಾರ್ಗವದರ್ಪವಿನಾಶಕ ರಾಮ ।
ಶ್ರೀಮದಯೋಧ್ಯಾಪಾಲಕ ರಾಮ ॥

ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ॥

 

 


 ॥ ಅಯೋಧ್ಯಾಕಾಂಡಃ ॥

ಅಗಣಿತಗುಣಗಣಭೂಷಿತ ರಾಮ ।
ಅವನೀತನಯಾಕಾಮಿತ ರಾಮ ।
ರಾಕಾಚನ್ದ್ರಸಮಾನನ ರಾಮ ।
ಪಿತೃವಾಕ್ಯಾಶ್ರಿತಕಾನನ ರಾಮ ।

ಪ್ರಿಯಗುಹವಿನಿವೇದಿತಪದ ರಾಮ ।
ತತ್ಕ್ಷಾಲಿತನಿಜಮೃದುಪದ ರಾಮ ।
ಭರದ್ವಾಜಮುಖಾನನ್ದಕ ರಾಮ ।
ಚಿತ್ರಕೂಟಾದ್ರಿನಿಕೇತನ ರಾಮ ।

ದಶರಥಸನ್ತತಚಿನ್ತಿತ ರಾಮ ।
ಕೈಕೇಯೀತನಯಾರ್ಪಿತ ರಾಮ ।
ವಿರಚಿತನಿಜಪಿತೃಕರ್ಮಕ ರಾಮ ।
ಭರತಾರ್ಪಿತನಿಜಪಾದುಕ ರಾಮ ॥
 
ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ॥

 

 

॥ ಅರಣ್ಯಕಾಂಡಃ ॥

ದಂಡಕಾವನಜನಪಾವನ ರಾಮ ।
ದುಷ್ಟವಿರಾಧವಿನಾಶನ ರಾಮ ।
ಶರಭಂಗಸುತೀಕ್ಷ್ಣಾರ್ಚಿತ ರಾಮ ।
ಅಗಸ್ತ್ಯಾನುಗ್ರಹವರ್ದಿತ ರಾಮ ।

ಗೃಧ್ರಾಧಿಪಸಂಸೇವಿತ ರಾಮ ।
ಪಂಚವಟೀತಟಸುಸ್ಥಿತ ರಾಮ ।
ಶೂರ್ಪಣಖಾರ್ತ್ತಿವಿಧಾಯಕ ರಾಮ ।
ಖರದೂಷಣಮುಖಸೂದಕ ರಾಮ ।

ಸೀತಾಪ್ರಿಯಹರಿಣಾನುಗ ರಾಮ ।
ಮಾರೀಚಾರ್ತಿಕೃತಾಶುಗ ರಾಮ ।
ವಿನಷ್ಟಸೀತಾನ್ವೇಷಕ ರಾಮ ।
ಗೃಧ್ರಾಧಿಪಗತಿದಾಯಕ ರಾಮ ।

ಶಬರೀದತ್ತಫಲಾಶನ ರಾಮ ।
ಕಬನ್ಧಬಾಹುಚ್ಛೇದನ ರಾಮ ॥

ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ॥


॥ ಕಿಷ್ಕಿಂಧಾಕಾಂಡಃ ॥

ಹನುಮತ್ಸೇವಿತನಿಜಪದ ರಾಮ ।
ನತಸುಗ್ರೀವಾಭೀಷ್ಟದ ರಾಮ ।
ಗರ್ವಿತವಾಲಿಸಂಹಾರಕ ರಾಮ ।
ವಾನರದೂತಪ್ರೇಷಕ ರಾಮ ।

ಹಿತಕರಲಕ್ಷ್ಮಣಸಂಯುತ ರಾಮ ।
ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ।



॥ ಸುಂದರಕಾಂಡಃ ॥

ಕಪಿವರಸನ್ತತಸಂಸ್ಮೃತ ರಾಮ ।
ತದ್ಗತಿವಿಘ್ನಧ್ವಂಸಕ ರಾಮ ।
ಸೀತಾಪ್ರಾಣಾಧಾರಕ ರಾಮ ।
ದುಷ್ಟದಶಾನನದೂಷಿತ ರಾಮ ।

ಶಿಷ್ಟಹನೂಮದ್ಭೂಷಿತ ರಾಮ ।
ಸೀತವೇದಿತಕಾಕಾವನ ರಾಮ ॥
ಕೃತಚೂಡಾಮಣಿದರ್ಶನ ರಾಮ ।
ಕಪಿವರವಚನಾಶ್ವಾಸಿತ ರಾಮ ॥

ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ॥


॥ ಯುದ್ಧಕಾಂಡಃ ॥

ರಾವಣನಿಧನಪ್ರಸ್ಥಿತ ರಾಮ ।
ವಾನರಸೈನ್ಯಸಮಾವೃತ ರಾಮ ।
ಶೋಷಿತಶರದೀಶಾರ್ತ್ತಿತ ರಾಮ ।
ವಿಭೀಷ್ಣಾಭಯದಾಯಕ ರಾಮ ।

ಪರ್ವತಸೇತುನಿಬನ್ಧಕ ರಾಮ ।
ಕುಮ್ಭಕರ್ಣಶಿರಶ್ಛೇದನ ರಾಮ ।
ರಾಕ್ಷಸಸಂಘವಿಮರ್ಧಕ ರಾಮ ।
ಅಹಿಮಹಿರಾವಣಚಾರಣ ರಾಮ ।

ಸಂಹೃತದಶಮುಖರಾವಣ ರಾಮ ।
ವಿಧಿಭವಮುಖಸುರಸಂಸ್ತುತ ರಾಮ ।
ಖಃಸ್ಥಿತದಶರಥವೀಕ್ಷಿತ ರಾಮ ।
ಸೀತಾದರ್ಶನಮೋದಿತ ರಾಮ ।

ಅಭಿಷಿಕ್ತವಿಭೀಷಣನುತ ರಾಮ ।
ಪುಷ್ಪಕಯಾನಾರೋಹಣ ರಾಮ ।
ಭರದ್ವಾಜಾದಿನಿಷೇವಣ ರಾಮ ।
ಭರತಪ್ರಾಣಪ್ರಿಯಕರ ರಾಮ ।

ಸಾಕೇತಪುರೀಭೂಷಣ ರಾಮ ।
ಸಕಲಸ್ವೀಯಸಮಾನಸ ರಾಮ ।
ರತ್ನಲಸತ್ಪೀಠಾಸ್ಥಿತ ರಾಮ ।
ಪಟ್ಟಾಭಿಷೇಕಾಲಂಕೃತ ರಾಮ ।

ಪಾರ್ಥಿವಕುಲಸಮ್ಮಾನಿತ ರಾಮ ।
ವಿಭೀಷಣಾರ್ಪಿತರಂಗಕ ರಾಮ ।
ಕೀಶಕುಲಾನುಗ್ರಹಕರ ರಾಮ ।
ಸಕಲಜೀವಸಂರಕ್ಷಕ ರಾಮ ।
ಸಮಸ್ತಲೋಕೋದ್ಧಾರಕ ರಾಮ ॥

ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ॥


 
॥ ಉತ್ತರಕಾಂಡಃ ॥

ಆಗತ ಮುನಿಗಣ ಸಂಸ್ತುತ ರಾಮ ।
ವಿಶ್ರುತದಶಕಂಠೋದ್ಭವ ರಾಮ ।
ಸಿತಾಲಿಂಗನನಿರ್ವೃತ ರಾಮ ।
ನೀತಿಸುರಕ್ಷಿತಜನಪದ ರಾಮ ।

ವಿಪಿನತ್ಯಾಜಿತಜನಕಜ ರಾಮ ।
ಕಾರಿತಲವಣಾಸುರವಧ ರಾಮ ।
ಸ್ವರ್ಗತಚಮ್ಬುಕ ಸಂಸ್ತುತ ರಾಮ ।
ಸ್ವತನಯಕುಶಲವನನ್ದಿತ ರಾಮ ।

ಅಶ್ವಮೇಧಕ್ರತುದಿಕ್ಷಿತ ರಾಮ ।
ಕಾಲಾವೇದಿತಸುರಪದ ರಾಮ ।
ಆಯೋಧ್ಯಕಜನಮುಕ್ತಿತ ರಾಮ ।
ವಿಧಿಮುಖವಿಭುದಾನನ್ದಕ ರಾಮ ।

ತೇಜೋಮಯನಿಜರೂಪಕ ರಾಮ ।
ಸಂಸೃತಿಬನ್ಧವಿಮೋಚಕ ರಾಮ ।
ಧರ್ಮಸ್ಥಾಪನತತ್ಪರ ರಾಮ ।
ಭಕ್ತಿಪರಾಯಣಮುಕ್ತಿದ ರಾಮ ।

ಸರ್ವಚರಾಚರಪಾಲಕ ರಾಮ ।
ಸರ್ವಭವಾಮಯವಾರಕ ರಾಮ ।
ವೈಕುಂಠಾಲಯಸಂಸ್ತಿತ ರಾಮ ।
ನಿತ್ಯನನ್ದಪದಸ್ತಿತ ರಾಮ ॥

ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ॥ 


-----------------*------------------*------------------*-----------------